ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ: ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೋಡ್ತಿವಿ – ರೈತ ಸಂಘ
1 min readಮೈಸೂರು: ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೋಡ್ತಿವಿ ಅಂತ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಘೋಷಣೆ.
ಲಾಕ್ಡೌನ್ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದೆ. ಕೃಷಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಎಲ್ಲಾ ಕಡೆ ಬಂದು ಹೋದ್ರು. ಈಗ ಕೃಷಿ ಸಚಿವ ಬಿ.ಸಿ ಪಾಟೀಲ್ ಪತ್ತೆನೇ ಇಲ್ಲಾ. ದಯಮಾಡಿ ಹುಡುಕಿಕೊಟ್ಟು, ರೈತರಿಂದ ಸೂಕ್ತ ಬಹುಮಾನ ಪಡೆಯಿರಿ ಅಂತ ಮೈಸೂರಿನ ಸುದ್ದಿಗೋಷ್ಟಿ ನಡೆಸಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
ಸರ್ಕಾರದಿಂದ ಎಲ್ಲಾ ರೀತಿಯಾದ ಪ್ಯಾಕೇಜ್ ಸಿಕ್ತಿದೆ. ಆದ್ರೆ ರೈತರಿಗೆ ಯಾವುದೇ ಅನುಕೂಲವಿಲ್ಲ. ಉತ್ತರ ಭಾಗದಲ್ಲಿ ಈಗ ಮುಂಗಾರು ಶುರುವಾಗಿದೆ. ನಮಗೆ ಏಪ್ರಿಲ್ ಕೊನೆಯಲ್ಲಿ ಮುಂಗಾರು ಆಗುತ್ತೆ. ಮೈಸೂರು ಜಿಲ್ಲೆಯಲ್ಲಿ 2.27 ಲಕ್ಷ ಎಕರೆಯಷ್ಟು ಕಾಟನ್ ಬೆಳಿತಿದ್ವು. ಮುಸುಕಿನ ಜೋಳ ಬೆಳಿತಿದ್ವು ಇದೆಲ್ಲವೂ ಕಡಿಮೆಯಾಗಿದೆ. ನಮಗೆ ಬಿತ್ತನೆ ಬೀಜ, ಗೊಬ್ಬರದ, ಕೀಟನಾಶಕಗಳ ಕೊರತೆ ಹೆಚ್ಚಾಗಿದೆ.
ರಾಜ್ಯದ 12 ಜಿಲ್ಲೆಯಲ್ಲಿ ಲಕ್ಷಾಂತರ ಎಕೆರೆಯಲ್ಲಿ ಮುಸುಕಿನ ಜೋಳ ಬೆಳೆಯುತ್ತವೆ. ಆದ್ರೀಗ ಬಿತ್ತನೆ ಬೀಜದ ಕೊರತೆಯಾಗಿದೆ. ಕಳಪೆ ಬಿತ್ತನೆ ಬೀಜದಿಂದ ಬೆಳೆ ಸರಿಯಾಗಿ ಬಂದಿಲ್ಲ. ಲಾಕ್ಡೌನ್ ಕಾರಣದಿಂದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳು ಬಂದಿಲ್ಲ ಅಂತಾರೆ. ಸರ್ಕಾರ ರೈತರಿಗೆ ಯಾವುದೇ ಸೌಲಭ್ಯ ನೀಡ್ತಿಲ್ಲ. ಈಗಾಗಲೇ ರಾಗೊಬ್ಬರದ ಬೆಲೆ ಹೆಚ್ಚಾಗಿದೆ. ಕೆಲವು ಭಾಗದಲ್ಲಿ ಹಳೆ ಸ್ಟಾಕ್ನ್ನ ಹೊಸ ರೇಟ್ಗೆ ಮಾರಾಟ ಮಾಡ್ತಿದ್ದಾರೆ.
ಅಭಿವೃದ್ಧಿ ಶೂನ್ಯ ಮುಖ್ಯಮಂತ್ರಿ ಯಡಿಯೂರಪ್ಪ:
ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ನೀಡಲು ಸಿದ್ದ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರ. ಅಭಿವೃದ್ಧಿ ಶೂನ್ಯ ಮುಖ್ಯಮಂತ್ರಿ ಯಡಿಯೂರಪ್ಪ. ಯಡಿಯೂರಪ್ಪ ಆಡಳಿತ ಸಮಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಯಾಗಿದ್ದು ಬೇಸರ. ಈಗ ಯಡಿಯೂರಪ್ಪರಿಗೆ ಪಕ್ಷದಲ್ಲಿ ಹಿಡಿತ ಇಲ್ಲ. ಅದು ವಯಸ್ಸಿನ ಕಾರಣ ಇರಬಹುದು, ಅಥವಾ ಪಕ್ಷದಲ್ಲಿ ಹಿಡಿತವಿಲ್ಲದಿರಬಹುದು. ಆದ್ರೆ ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ನೀಡುತ್ತಾರೆ ಅಂದರೆ ಇವ್ರು ಅಸಮರ್ಥರು.
ರೈತರ ಸಮಸ್ಯೆಗಳನ್ನ ಕೇಳ್ತಿದ್ರು, ಆದ್ರೆ ಒಂದೂ ಸಮಸ್ಯೆಗೂ ಪರಿಹಾರ ಸಿಗ್ತಿರ್ಲಿಲ್ಲ. ವೈಯಕ್ತಿಕವಾಗಿ ಯಡಿಯೂರಪ್ಪರ ಮೇಲೆ ಗೌರವವಿದೆ. ಆದ್ರೆ ಆಡಳಿತದಲ್ಲಿ ಯಡಿಯೂರಪ್ಪ ಸಾಧನೆ ಶೂನ್ಯ. ಬಿಜೆಪಯಲ್ಲಿ ಯಾರೇ ಅಧಿಕಾರದಲ್ಲಿದ್ದರು, ಅದು ರೈತರಿಗೆ ಪ್ರಯೋಜನವಿಲ್ಲ. ಮೈಸೂರಿನಲ್ಲಿ ರೈತ ನಾಯಕ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.