ಮಾಹಿತಿ ಕೇಳಿದ್ದು ತಪ್ಪಾ!? ಪಾಲಿಕೆ ಆಯುಕ್ತರ ಆರೋಪಕ್ಕೆ ಫಸ್ಟ್ ರಿಯಾಕ್ಷನ್ ನೀಡಿದ ಡಿಸಿ ರೋಹಿಣಿ ಸಿಂಧೂರಿ!
1 min readಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ಆರೋಪಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಫಸ್ಟ್ ರಿಯಾಕ್ಷನ್ ನೀಡಿದ್ದು ಮಾಹಿತಿ ಕೇಳಿದ್ದೇ ತಪ್ಪಾ ಅಂತ ಪ್ರಶ್ನೆ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮಗೆ ಕೋವಿಡ್ ಅಂಕಿ ಅಂಶ’ ಸಿಎಸ್ಆರ್ ಫಂಡ್ ಮಾಹಿತಿ ಬಂದಿಲ್ಲ. ನೀವೂ ಎಷ್ಟು ಸಿಎಸ್ಆರ್ ಫಂಡ್ ಬಳಕೆ ಮಾಡಿದ್ದೀರಾ? ವಾರ್ಡ್ ವೈಸ್ ಎಷ್ಟು ಕೋವಿಡ್ ಪ್ರಕರಣ ಇದೆ. ಸಿಎಸ್ಆರ್ ಫಂಡ್ ಯಾರಿಗೆ ಖರ್ಚು ಮಾಡಿದ್ದೀರಾ? ಈ ಮಾಹಿತಿಯನ್ನು ಪಾಲಿಕೆ ಆಯುಕ್ತರಿಗೆ ಕೊಡಿ ಎಂದು ಕೇಳಿದ್ದೇನೆ.
ಇವತ್ತು ಮುಖ್ಯ ಕಾರ್ಯದರ್ಶಿಗಳು ಮೈಸೂರಿಗೆ ಬರುತ್ತಿದ್ದಾರೆ. ಈ ಎಲ್ಲ ವಿಚಾರ ಅವರ ಗಮನಕ್ಕು ತರುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಸಿಎಸ್ಆರ್ ಫಂಡ್ ಇರಲಿದೆ. ಶೇ. 30 ರಷ್ಟು ಫಂಡ್ ರಿಸರ್ವ್ ಫಂಡ್ ಇಡಬೇಕು. ಇದೀಗಾ ವಾರದ ಹಿಂದೆ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಇದೆ. ಇದಕ್ಕೆ ನಾವು ಸಿಎಸ್ಆರ್ ಫಂಡ್ ಪಡೆದುಕೊಳ್ಳಬೇಕಿದೆ. ಸಿಎಸ್ಆರ್ ಫಂಡ್ ಏನಾಗಿದೆ ಎಂದು ಪಾಲಿಕೆ ಆಯುಕ್ತರಿಗೆ ಕೇಳಿದ್ದೇವೆ. ಇದಕ್ಕೆ ಅವರು ಎಲ್ಲವು ಖರ್ಚಾಗಿದೆ ಎಂದಿದ್ದಾರೆ. ಅದು ಹೇಗೆ ಖರ್ಚಾಗಿದೆ ಮಾಹಿತಿ ಕೊಡಿ ಎಂದಿ ಕೇಳಿದ್ದೇವೆ ಅಷ್ಟೇ. 12 ಕೋಟಿ ಖರ್ಚಾಗಿದೆ ಅಂದ್ರೆ ಎಲ್ಲಿ ಖರ್ಚಾಗಿದೆ ಮಾಹಿತಿ ಕೊಡಿ ಎಂದಿದ್ದೇವೆ.
ನಿಮಗೆ ನಿಮ್ಮ ಮೇಲಿನ ಅಧಿಕಾರಿ ಮೇಲೆ ಬೇಸರ ಇದ್ದರೆ ಹೇಳಬೇಕು. ಅದನ್ನ ಬಿಟ್ಟು ಮಾಧ್ಯಮದ ಮುಂದೆ ಹೇಳೋದು ಎಷ್ಟು ಸರಿ? ಪ್ರತಿಯೊಂದಕ್ಕು ಒಂದು ಸಿಸ್ಟಮ್ ಇರುತ್ತೆ. ಆ ಸಿಸ್ಟಮ್ ಮೂಲಕವೇ ಹೋಗಬೇಕು’ ಅದನ್ನ ಮೀರಬಾರದು.
ಅವರು ಬಂದಾಗಿನಿಂದ ಸಮಸ್ಯೆ ಹೇಳಿಕೊಂಡಿಲ್ಲ. ಇದೀಗಾ ಒಂದು ವಾರ ಹತ್ತು ದಿನದಿಂದ ಸಮಸ್ಯೆ ಇದೆ ಅಂತಾರೆ. ಈಗ ನಾನು ಈ ಬಗ್ಗೆ ಉತ್ತರ ಕೊಡುವ ಜವಬ್ದಾರಿ ಅಲ್ಲ. ನಾವೇನಿದ್ರು ಸರ್ಕಾರಕ್ಕೆ ವರದಿ ಕೊಡ್ತಿವಿ ಅಷ್ಟೇ.
ನಾವು ಈ ಬಗ್ಗೆ ಕೇವಲ ಪ್ರೆಸ್ನೋಟ್ ಕೊಟ್ಟಿದ್ದೇವೆ. ಈಗ ಎಲ್ಲರಿಗು ಒತ್ತಡ ಇದೆ’ ಇಡೀ ಸಿಸ್ಟಮ್ ಈಗ ಒತ್ತಡದಲ್ಲಿ ಕೆಲಸ ಮಾಡ್ತಿದೆ. ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಎಲ್ಲರು ಒತ್ತಡದಲ್ಲಿ ಕೆಲಸ ಮಾಡ್ತಿದ್ದಾರೆ. ಈ ಸಮಯದಲ್ಲಿ ಸರಿಯಾದ ಮಾಹಿತಿ ಕೊಡಬೇಕು ಎಂಬುದು ನಮ್ಮ ಗುರಿ.
ಪಾಲಿಕೆ ಆಯುಕ್ತರು ವಾರ್ಡ್ ವೈಸ್ ಕರೋನಾ ಅಂಕಿ ಅಂಶ ಕೊಡಬೇಕು. ವಾರ್ಡ್ವೈಸ್ ಡಿಟೈಲ್, ಪಂಚಾಯತ್ ವೈಸ್ ಡಿಟೈಲ್ ಕೊಡಬೇಕು. ಯಾವ ಜಿಲ್ಲೆಯಲ್ಲು ಮಾಡದ ಕೆಲಸ ಮೈಸೂರು ಜಿಲ್ಲೆಯಲ್ಲಿ ಆಗ್ತಿದೆ. ನಾವು ಸರ್ಕಾರಕ್ಕೆ ಕೊಡುವಂತ ಕೋವಿಡ್ ರಿಪೋರ್ಟ್ ನಲ್ಲಿ ತಪ್ಪು ಆಗಬಾರದು. ನಿಮ್ಮ ವಾರ್ಡ್ನಲ್ಲಿ ಎಷ್ಟು ಕೇಸ್ ಇದೆ ಎಂಬುದು ಪಾಲಿಕೆ ಆಯುಕ್ತರಿಗೆ ಗೊತ್ತಿರಬೇಕು.
ನೀವೂ ನಮಗೆ ಅಥಾರಟಿ ಅಲ್ಲಿ ಎಂಬ ಶಿಲ್ಪಾನಾಗ್ ಹೇಳಿಕೆ ವಿಚಾರ. ಅಧಿಕಾರಿಗಳಿಗೆ ಒಂದು ಫೋರಂ ಇರುತ್ತೆ. ಆ ಅಧಿಕಾರದನ್ವಯ ನಾನು ಹೇಳಿದ್ದೇನೆ ಅಷ್ಟೇ. ನಮ್ಮ ಉದ್ದೇಶ ಇಷ್ಟೇ’ ಜುಲೈ ಫಸ್ಟ್ಗೆ ಕೋವಿಡ್ ಮುಕ್ತ ಮೈಸೂರು ಮಾಡಬೇಕು. ನಾವು ಜನರಿಗೆ ಸರಿಯಾದ ಅಂಕಿ ಅಂಶ ಕೊಡಬೇಕು. ಒಂದು ವಾರ್ಡ್ನಲಿ 400 ಕೇಸ್ ಇದ್ದು ನಾಳೆ 40 ಕೇಸ್ ಬಂದ್ರೆ. ಅದು ಸರಿಯಾಗಿ ಹೊಂದಾಣಿಕೆ ಆಗಲ್ಲ. ಎಲ್ಲರು ಮಾಹಿತಿ ಕೇಳುವಾದ ವಾರ ರೂಂ, ಪಂಚಾಯತ್ ಇದ್ದಾನೆ ಪಡೆಯಬೇಕು. ಇದರಲ್ಲಿ ವ್ಯತ್ಯಾಸ ಬರಬಾರದು ಅದು ಅಧಿಕೃತ ಡಾಕ್ಯುಮೆಂಟ್. ಅದು ಸರಿಯಾಗಿ ಇರಬೇಕೆಂಬುದು ನಮ್ಮ ಉದ್ದೇಶ ಅಷ್ಟೇ ಅಂತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.