ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ಅಂಗೀಕರಿಸದಂತೆ ಪ್ರಧಾನಿಗೆ ಪತ್ರ ಬರೆದ ಶಾಸಕ
1 min readಮೈಸೂರು: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ವಿಚಾರ ಶಿಲ್ಪಾನಾಗ್ ರಾಜೀನಾಮೆ ಅಂಗೀಕರಿಸದಂತೆ ಮೈಸೂರಿನ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕೆ.ಆರ್.ಕ್ಷೇತ್ರ ಶಾಸಕ S.A.ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಶಿಲ್ಪಾನಾಗ್ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೋವಿಡ್ ನಿರ್ವಹಣೆಗೆ ಹೊಸ ಹೊಸ ಯೋಜನೆ ತಂದಿದ್ದಾರೆ. ಯಾವುದೇ ಕಾರಣಕ್ಕು ಅವರ ರಾಜೀನಾಮೆ ಅಂಗೀಕರಿಸಬಾರದು ಅಂತ ಪತ್ರದಲ್ಲಿ ಉಲ್ಲೇಖಿಸಿ ಮೋದಿಗೆ ರಾಮದಾಸ್ ಪತ್ರ ಬರೆದಿದ್ದಾರೆ.
ಪತ್ರದ ಪ್ರತಿಯನ್ನ ರಾಮದಾಸ್ ಸಿಎಂ ಹಾಗೂ ಸಿಎಸ್ಗು ರವಾನಿಸಿದ್ದಾರೆ. ಈ ಮೂಲಕ ಐಎಎಸ್ ಅಧಿಕಾರಿ ಶಿಲ್ಪಾನಾಗ್ ಪರ ಶಾಸಕ ರಾಮದಾಸ್ ನಿಂತಿದ್ದಾರೆ. ಅಲ್ಲದೆ ರಾಮದಾಸ್ ಜೊತೆ ಮೈಸೂರಿನ ಹಲವು ಜನಪ್ರತಿನಿಧಿಗಳ ಸಾಥ್ ನೀಡಿದ್ದಾರೆ.