ಕೋವಿಡ್ ಟೆಲಿ ಕೇರ್ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್
1 min readಮೈಸೂರು: ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಅವರು ನೆನ್ನೆ ಕೋವಿಡ್ ಟೆಲಿ ಕೇರ್ ವೈದ್ಯರೊಂದಿಗೆ (ಭಾರತೀಯ ವೈದ್ಯರು ಹಾಗೂ ಯುಕೆ-ವಿದೇಶಿ ಭಾರತೀಯ ವೈದ್ಯರು) ಸಮಾಲೋಚನೆ ನಡೆಸಿದರು.
ಈ ವೇಳೆ ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಂತ ಗ್ರಾಮೀಣ ಪ್ರದೇಶದ ಜನರಿಗೂ ಟೆಲಿ ಕೇರ್ ವ್ಯವಸ್ಥೆಯನ್ನು ವಿಸ್ತರಿಸುವ ಸಂಬಂಧ ಚರ್ಚೆ ನಡೆಸಿ ಹಾಗೂ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.