ಕೋವಿಡ್ ವಿರುದ್ಧ ಹೋರಾಡಲು ಮೈಸೂರಿನಿಂದ ವಿನೂತನ ಪ್ರಯತ್ನ
1 min readಮೈಸೂರು: ಇಂದು ಪೂಜೆ ಮಹಾಪೌರರಾದ ಶ್ರೀಮತಿ ರುಕ್ಮಿಣಿ ಮಾದೇಗೌಡ ರವರ ವಾರ್ಡ್ ನಂಬರ್ 36 & ಉಪಮಹಾಪೌರರ ವಾರ್ಡ್ ನಂಬರ್ 10ರಲ್ಲೊ ಇಂದು ಮನೆ ಮನೆ ಸಮೀಕ್ಷೆಗೆ ಪ್ರಾರಂಭಿಸಿ, ಕೋವಿಡ್ ವಿರುದ್ಧ ಹೋರಾಡಲು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವತಃ ವಾರ್ಡ್ ಮಟ್ಟದ ಅಧ್ಯಕ್ಷರಾಗಿರುವ ಶ್ರೀಮತಿ ರುಕ್ಮಿಣಿ ಗೌಡ ರವರು ಪಾಲಿಕೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರ ಒಳಗೊಂಡ WLTF ಪ್ರಾಥಮಿಕ ಹಂತದಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಆಕ್ಸಿ ಮೀಟರ್ ಮೂಲಕ ಅವರನ್ನು ಚೆಕ್ ಮಾಡುವುದು ಥರ್ಮಾಸ್ಕ್ಯಾನ್ ಮೂಲಕ ಟೆಂಪರೇಚರ್ ಚೆಕ್ ಮಾಡುವುದು ಹಾಗೂ ಅವರ ಆರೋಗ್ಯದಲ್ಲಿ ಏರುಪೇರು ಆದಲ್ಲಿ ಅವರನ್ನು ತಕ್ಷಣವೇ ಹತ್ತಿರದಲ್ಲಿರುವ PHC ಸೆಂಟರ್ ಗಳಿಗೆ ಹಾಗೂ ಕೋವಿಡ್ ಮಿತ್ರ ಸೆಂಟರ್ ಗಳಿಗೆ ಸೇರಿಸಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಅನುಕೂಲ ಮಾಡಲಾಗುತ್ತಿದೆ ಹಾಗೂ ಈ ವಿನೂತನ ಕಾರ್ಯಕ್ರಮವನ್ನು ಮೈಸೂರಿನ ಎಲ್ಲಾ 65 ವಾರ್ಡ್ ಗಳಿಗೆ ಇಂದಿನಿಂದ ಪ್ರಾರಂಭಿಸಲು ಚಾಲನೆ ನೀಡಲಾಯಿತು.
ಪಾಲಿಕೆ ಮಾನ್ಯ ಆಯುಕ್ತರು, ಉಪ ಮಹಾಪೌರರು ಎಲ್ಲಾ ವಾರ್ಡ್ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡು, ಎಲ್ಲಾ ವಾರ್ಡ್ ಗಳಲ್ಲಿ ಕಾರ್ಯ ಪ್ರವೃತವಾಗಿದೆ.