ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಡೀ ಕುಟುಂಬ ಕರೋನಾ ಪಾಸಿಟಿವ್
1 min readಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಡೀ ಕುಟುಂಬ ಕರೋನಾ ಪಾಸಿಟಿವ್. ಆದರೆ ರೋಹಿಣಿ ಸಿಂಧೂರಿಗೆ ಮಾತ್ರ ನೆಗೆಟಿವ್ ಬಂದಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಂದೆ-ತಾಯಿ, ಅತ್ತೆ-ಮಾವ ಹಾಗೂ ಪತಿ ಎಲ್ಲರಿಗೂ ಕರೋನಾ ಪಾಸಿಟಿವ್ ಧೃಢಪಟ್ಟಿದೆ. ಕುಟುಂಬಸ್ಥರೆಲ್ಲರು ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಜಾಗ್ರತೆ ವಹಿಸಿದ ಕಾರಣ ಕುಟುಂಬಸ್ಥರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.
ಡಿಸಿ ರೋಹಿಣಿ ಸಹ, ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದು ನೆಗೆಟಿವ್ ರಿಪೋರ್ಟ್ ಬಂದಿದೆ.