ಆಕ್ಸಿಜನ್ – ಲಸಿಕೆ ಕೊರತೆ ಆಯ್ತು, ಇದೀಗಾ ಮೈಸೂರಿನಲ್ಲಿ ಕೊರೊನಾ ಔಷಧಿ ಕೊರತೆ..!
1 min readಮೈಸೂರು: ಮೈಸೂರಿನಲ್ಲಿ ಕೊರೊನಾ ಔಷಧಿ ಕೊರತೆಯುಂಟಾಗಿದ್ದು ಬಿಜೆಪಿ ಶಾಸಕರೊಬ್ಬರು ಕೊರತೆ ನೀಗಿಸುವಂತೆ ಸಿಎಂ ಗೆ ಪತ್ರ ಬರೆದಿದ್ದಾರೆ.
ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು ಮೈಸೂರಿನಲ್ಲಿ ಕೊರೊನಾ ಔಷಧಗಳ ಬಾರಿ ಕೊರತೆ ಉಂಟಾಗಿದೆ. ಮೈಸೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ. ಈ ಸಂಬಂಧ ಮೇ 5 ಹಾಗೂ 13 ರಂದು ಅಧಿಕಾರಿಗಳು ಸಂಬಂಧಪಟ್ಟವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಈ ಕೊರತೆಯನ್ನು ಶೀಘ್ರದಲ್ಲಿ ನಿವಾರಣೆ ಮಾಡಬೇಕು. ಕೋವಿಡ್ ಮೊದಲನೆ ಅಲೆ ಸಂದರ್ಭದಂತೆ ಕೆ.ಟಿ.ಪಿ.ಪಿ ಕಾಯ್ದೆಯ ಅಡಿ ಔಷಧಿ ಖರೀದಿ ಮಾಡಬೇಕು. ಯಾವುದೇ ಟೆಂಡರ್ ಕರೆಯದೆ ಔಷಧಿ ಖರೀದಿ ಮಾಡಿ ಪೂರೈಕೆ ಮಾಡಿ. ಇದಕ್ಕಾಗಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ ಶಾಸಕ ಎಸ್.ಎ.ರಾಮದಾಸ್.