ಚಾಮರಾಜನಗರ ದುರಂತ: ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್
1 min readಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 24 ಜನರ ಸಾವು ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
‘ಆಕ್ಸಿಜನ್ ಕೊರತೆ, ಚಾಮರಾಜನಗರ ಜಿಲ್ಲಾಧಿಕಾರಿ ವೈಫಲ್ಯ ದುರಂತಕ್ಕೆ ಕಾರಣ ಎಂದು ಪ್ರಕರಣದ ವರದಿ ನೀಡಲು ನೇಮಿಸಿದ್ದ ಸಮಿತಿ ಅಭಿಪ್ರಾಯಪಟ್ಟಿದೆ.
ಮೇ 2 ರಾತ್ರಿಯಿಂದ ಮೇ 3ರ ರಾತ್ರಿವರೆಗೆ ಆಕ್ಸಿಜನ್ ಇರಲಿಲ್ಲ. ಹಾಗೆಯೇ ಪರಿಸ್ಥಿತಿ ನಿಭಾಯಿಸುವಲ್ಲಿ ಜಿಲ್ಲಾಧಿಕಾರಿ ವಿಫಲರಾಗಿದ್ದಾರೆ. ಆಕ್ಸಿಜನ್ ಪೂರೈಸಲು ಮೈಸೂರು ಡಿಸಿ ತಡೆಯೊಡ್ಡಿಲ್ಲ ಎಂದು ಹೇಳಿರುವ ಸಮಿತಿ ವರದಿಯಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಕೊಟ್ಟಿದೆ.
ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಕೂಡ ಸರ್ಕಾರವನ್ನು ಸಮಿತಿ ಒತ್ತಾಯಿಸಿದೆ.