ಮೈಸೂರಿನಲ್ಲಿ ವ್ಯಾಕ್ಸಿನ್ ನೋ ಸ್ಟಾಕ್: ವ್ಯಾಕ್ಸಿನೇಷನ್ ಸೆಂಟರ್ ಮುಂದೆ ಹಿರಿಯ ನಾಗರೀಕರ ಆಕ್ರೋಶ
1 min readಮೈಸೂರು: ಯಾಕ್ರಿ ನಮ್ಮನ್ನ ಸುಮ್ಮನ್ನೇ ಕಾಯಿಸ್ತೀರಾ..? ಹೇಳಿದ್ರೆ ನಾವು ಬರ್ತಾನೆ ಇರಲಿಲ್ಲ. ಇಲ್ಲ ಅಂದ್ರೆ ನಮ್ಮನ್ನ ಯಾಕೆ ಕಾಯಿಸಬೇಕಿತ್ತು ಸ್ವಾಮಿ ಅಂತ ಮೈಸೂರಿನ ವ್ಯಾಕ್ಸಿನೇಷನ್ ಸೆಂಟರ್ ಮುಂದೆ ಹಿರಿಯ ನಾಗರೀಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ವ್ಯಾಕ್ಸಿನ್ ನೋ ಸ್ಟಾಕ್. ಬೆಳಿಗ್ಗೆಯಿಂದ ಕಾದವರಿಗೆ ಕಂಪ್ಯೂಟರ್ ರಿಪೇರಿ ನೆಪ ಹೇಳಿ ಆರೋಗ್ಯ ಸಿಬ್ಬಂದಿ ಕಳುಹಿಸಿದ್ದಾರೆ. ಸಿಬ್ಬಂದಿ ನಡವಳಿಕೆಯಿಂದ ಕುಪಿತರಾದ ನಾಗರೀಕರು ನಮ್ಮನ್ನ ಯಾಕೆ ಕಾಯಿಸಬೇಕಿತ್ತು ಸ್ವಾಮಿ ಅಂತ ಕಿಡಿ ಕಾರಿದ್ದಾರೆ.
ಬೆಳಿಗ್ಗೆಯಿಂದ ವ್ಯಾಕ್ಸಿನ್‌ಗೆ ಕಾಯಿಸಿದ್ದಾರೆ. ಈಗ ಬೇರೆ ಬೇರೆ ಕಾರಣ ಹೇಳಿ ಕಳುಹಿಸುತ್ತಿದ್ದಾರೆ. ನಮಗೆ ಎರಡನೇ ಡೋಸ್ ಬೇಕು. 30 ರಿಂದ 45 ದಿನದಲ್ಲಿ ಎರಡನೇ ಡೋಸ್ ಕೊಡುತ್ತೇವೆ ಅಂದ್ರು. ಆದ್ರೆ ಈಗ 45 ದಿನ ಬಿಟ್ಟು ಬನ್ನಿ ಅನ್ತಿದ್ದಾರೆ. ಯಾವುದನ್ನು ನಂಬೋದು ನೀವೆ ಹೇಳಿ ಅಂತ ಮೈಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹಿರಿಯರು ತಮ್ಮ ಅಳಲು ತೋಡಿಕೊಂಡರು.
ಬೆಳಿಗ್ಗೆಯಿಂದ ಕಾಯುತ್ತ ಕುಳಿತ ನೂರಾರು ಮಂದಿ ಹಿರಿಯರಿಗೆ ಇದೀಗಾ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವಾಕ್ಸಿನ್ ಅಭಾವ ನೆಪ ಹೇಳಿ ಕಳುಹಿಸುತ್ತಿದ್ದಾರೆ.