KRS ಹಿನ್ನೀರಿನಲ್ಲಿ ಕಾಡಾನೆಗಳು ಪ್ರತ್ಯಕ್ಷ: ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭ
1 min readಕೆಆರ್ ನಗರ: ಇಂದು ಬೆಳಿಗ್ಗೆ ಎರಡು ಗಂಡು ಕಾಡಾನೆಗಳು KR Nagara ತಾಲುಕು ವ್ಯಾಪ್ತಿಯ ಕೆ. ಆರ್. ಎಸ್. ಜಲಾಶಯದ ಹಿನ್ನೀರಿನಿಂದ ಜಲಾಶಯವನ್ನು ದಾಟಿ ಮೈಸೂರು ತಾಲ್ಲೂಕು ವ್ಯಾಪ್ತಿಯ ಬೊಮ್ಮನಹಳ್ಳಿ ಸಮೀಪದ ಖಾಸಗಿ ಪ್ಲಾಂಟೇಶನ್ ನಲ್ಲಿ ಬೀಡು ಬಿಟ್ಟಿದ್ದು , ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಸಂಜೆಯ ನಂತರ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭಿಸಲಾಗಿರುತ್ತದೆ.
ಹುಣಸೂರು ಆನೆ ಕಾರ್ಯಪಡೆ,
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಚಿರತೆ ಕಾರ್ಯಪಡೆ ಸಿಬ್ಬಂದಿಗಳು ಪೋಲಿಸ್ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದೆ. ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ಇರುವಿಕೆ & ಚಲನ ವಲನದ pಬಗ್ಗೆ ಮಾಹಿತಿ ನೀಡಲಾಗಿರುತ್ತದೆ.