September 8, 2024

ಶಾಲಾ‌ ಮಕ್ಕಳ 2 ದಿನದ ಕ್ರೀಡಾಕೂಟಕ್ಕೆ ಚಾಲನೆ!

1 min read

ನಂಜನಗೂಡಿನಲ್ಲಿ ಎರಡು ದಿನಗಳ ಕಾಲ ನಡೆಯುವ ನಂಜನಗೂಡು ಕಸಬಾ ವಲಯ ಮಟ್ಟದ ಕ್ರೀಡಾಕೂಟಕ್ಕೆ ಇಂದು ಚಾಲನೆ ದೊರೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಂಜನಗೂಡು ವತಿಯಿಂದ 2022 23ನೇ ಸಾಲಿನ ಕಸಬಾ ವಲಯ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟವನ್ನ ಕ್ರೀಡಾಧ್ವಜ ನೆರವೇರಿಸಿ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್ ರಾಜು ಹಾಗೂ ಮತ್ತಿತರ ಗಣ್ಯರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು‌. ಇದೇ ಸಂದರ್ಭ ಪಟ್ಟಣವು ಸೇರಿದಂತೆ ಕಸಬಾ ಹೋಬಳಿಯ ಹತ್ತಾರು ಶಾಲಾ ಮಕ್ಕಳು ಆಕರ್ಷಕ ಪತ ಸಂಚಲನೆ ನಡೆಸುವ ಮೂಲಕ ಅತಿಥಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.

ಗೌರವ ವಂದನೆ ಸ್ವೀಕರಿಸಿದ ಅತಿಥಿ ಗಣ್ಯರು ವಿವಿಧ ಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಹಾಗೂ ದೈಹಿಕ ಶಿಕ್ಷಕರುಗಳನ್ನು ಪರಸ್ಪರ ಪರಿಚಯ ಮಾಡಿಕೊಂಡರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಮತ್ತು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಬಹಳ ಮುಖ್ಯ ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಹಾಗಾಗಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಇಲ್ಲಿಂದ ತಾಲೂಕು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧೆ ಮಾಡಿ ಗೆಲ್ಲುವ ಮೂಲಕ ನಮ್ಮ ತಾಲೂಕು ಹಾಗೂ ಶಾಲೆಗೆ ಕೀರ್ತಿ ತನ್ನಿ ಎಂದರು.

ಪಥ ಸಂಚಲನೆಯಲ್ಲಿ ವಿಜೇತರಾದ ತಂಡಗಳಿಗೆ ವೇದಿಕೆ ಮೇಲಿನ ಗಣ್ಯರು ಬಹುಮಾನ ವಿತರಣೆ ಮಾಡಿದರು ಹಾಗೆಯೇ ವೇದಿಕೆ ಮೇಲಿನ ಗಣ್ಯರನ್ನು ಸಹ ಕಾರ್ಯಕ್ರಮ ಆಯೋಜಕರಾದ ಕರಳಪುರ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಕೊಕ್ಕೋ ಕಬಡ್ಡಿ ವಾಲಿಬಾಲ್ ತ್ರೋಬಾಲ್ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ಗೆಲುವಿಗೆ ಸೆಣೆಸಾಟ ನಡೆಸುತ್ತಿದ್ದರು.

ಕಾರ್ಯಕ್ರಮದಲ್ಲಿ ಜುಬಿಲಿಯಂಟ್ ಕಾರ್ಖಾನೆಯ ಚೇತನ್ ಪಟೇಲ್ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವಕುಮಾರ್ ಜಿಲ್ಲ ಕಾರ್ಯದರ್ಶಿ ಮಹೇಶ್ ತಾಲೂಕು ಕಾರ್ಯದರ್ಶಿ ಸೋಮೇಶ್ ಉಪಾಧ್ಯಕ್ಷ ರಾಜುಸ್ವಾಮಿ ಸಹ ಕಾರ್ಯದರ್ಶಿ ಮಹದೇವಮೂರ್ತಿ ಮುಖ್ಯ ಶಿಕ್ಷಕಿ ಲೀಲಾವತಿ ಸಹ ಶಿಕ್ಷಕರಾದ ಗೋಪಿನಾಥ್ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *